ತಾರಾಗಣ - ಆದಿತ್ಯ ಬಾಬು, ರಮ್ಯಾನಿರ್ದೇಶನ - ವೀರ ಶಂಕರ್
ಸ್ಕಂದ ಆಡಿಯೋ
ಒಂದೇ ಚಿತ್ರ ಇಬ್ಬರು ಸಂಗೀತ ನಿರ್ದೇಶಕರು. ಕನ್ನಡದ ಮಟ್ಟಿಗೆ ಒಂದು ವಿಭಿನ್ನ ಪ್ರಯತ್ನ. "ಅಂತೂ ಇಂತೂ ಪ್ರೀತಿ ಬಂತು" ಚಿತ್ರದ ಒಟ್ಟು 7 ಹಾಡುಗಳಲ್ಲಿ ನಾಲ್ಕಕ್ಕೆ ಯುವನ್ ಶಂಕರ್ ರಾಜ್ ಸಂಗೀತ ನೀಡಿದರೆ ಮೂರು ಹಾಡುಗಳಿಗೆ ಗುರುಕಿರಣ್ ಸಂಗೀತವನ್ನೊದಗಿಸಿದ್ದಾರೆ.
ಎಲ್ಲಾ ಹಾಡುಗಳೂ ಅತ್ಯುತ್ತಮವಲ್ಲದಿದ್ದರೂ ಕೆಲವೊಂದು ಹಾಡುಗಳು ಮೊದಲ ಸಲ ಕೇಳುವಾಗಲೇ
ಮನಸ್ಸಿಗೆ ಹಿಡಿಸುವಂತಿವೆ. ಒಟ್ಟಿನಲ್ಲಿ ಅಂತೂ ಇಂತೂ ಒಂದು ಒಳ್ಳೇ ಅಲ್ಬಂ ಬಂತು ಅಂತ
ಧಾರಾಳವಾಗಿ ಹೇಳಬಹುದು.
ಗುರುಕಿರಣ್ ಹಾಡುಗಳು:
೧. ಮತ್ತೆ ಮತ್ತದೇಕೆ ನನಗೇನೋ ಹಂಬಲ... ಮೊದಲ ಸಲ ಮೊದಲ ಸಲ (ಕುನಾಲ್
ಗಂಜಾವಾಲ, ಆಕಾಂಕ್ಷಾ ಬಾದಾಮಿ): ಇಡೀ ಅಲ್ಬಂನ ಅತ್ಯುತ್ತಮ ಹಾಡು. ಕುನಾಲ್ ಗಂಜಾವಾಲ
ಜೊತೆಗೆ ಸುವರ್ಣ ವಾಹಿನಿಯ "ಕಾನ್ಫಿಡೆಂಟ್ ಸ್ಟಾರ್ ಸಿಂಗರ್"ನಲ್ಲಿ ಹಾಡುತ್ತಿರುವ
ಉದಯೋನ್ಮುಖ ಪ್ರತಿಭೆ ಕನ್ನಡಿತಿ ಆಕಾಂಕ್ಷಾ ಬಾದಾಮಿ ಹಾಡಿರುವ ಈ ಹಾಡಿನಲ್ಲೇನೋ
ಮಾಂತ್ರಿಕತೆಯಿದೆ ಎಂದರೆ ತಪ್ಪಾಗಲಾರದು.. ಮೊದಲ ಸಲ ಕೇಳುವಾಗಲೇ ಮನಸ್ಸಿಗೆ ಹಿತವಾದ
ಅನುಭವವನ್ನುಂಟು ಮಾಡುವ ಈ ಹಾಡು ಮತ್ತೆ ಮತ್ತೆ ಕೇಳ ಬೇಕೆನಿಸುತ್ತದೆ!. ಎಫ್ ಎಂ.
ರೇಡಿಯೋದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಈ ಹಾಡು ಚಿತ್ರದ ಪ್ರಮುಖ ಹೈಲೈಟ್ ಆಗಬಹುದು!
ಸಾಹಿತ್ಯ - ಹೃದಯ ಶಿವ.
9/10
೨. ಅಂತೂ ಇಂತೂ ನಿಜವಾಯಿತೇ, ಪ್ರೀತಿ ವಿಧಿಗೆ ಬಲಿಯಾಯಿತೇ (ಹರಿಹರನ್) - ಪ್ರೀತಿಯನ್ನು ಕಳೆದುಕೊಂಡ ಪ್ರೇಮಿಯೋರ್ವನ ವಿರಹ ಗೀತೆ. ಉತ್ತಮವಾದ ಹಾಡೂ. ಸಾಹಿತ್ಯ - ಹೃದಯ ಶಿವ.
7/10
೩. ಅಂತೂ ಇಂತೂ ನಿಜವಾಯಿತೇ, ಪ್ರೀತಿ ವಿಧಿಗೆ ಬಲಿಯಾಯಿತೇ (ಗುರುಕಿರಣ್) - ಮೇಲಿನ ಹಾಡಿನ ಮುಂದುವರಿದ ಭಾಗವನ್ನು ಗುರುಕಿರಣ್ ಹಾಡಿದ್ದಾರೆ. ಹರಿಹರನ್ ಆವೃತ್ತಿ ಹೆಚ್ಚು ಇಷ್ಟವಾಗುತ್ತದೆ.
6/10
ಯುವನ್ ಶಂಕರ್ ರಾಜ್ ಹಾಡುಗಳು:
೪. ಓ ಬೇಬಿ ಓ ಬೇಬಿ...(ಚೈತ್ರಾ,
ಹೇಮಂತ್) - ಚೈತ್ರಾ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗಲಿದೆ. ಹಿನ್ನೆಲೆ ಸಂಗೀತ
ಉತ್ತಮವಾಗಿದೆ. ಕವಿರಾಜ್ ಸಾಹಿತ್ಯವನ್ನು ಇನ್ನಷ್ಟು ಉತ್ತಮವಾಗಿಸಬಹುದಾಗಿತ್ತು.
6/10
೫. ನೀ ಚುಮು ಚುಮು (ಕಾರ್ತೀಕ್, ಚೈತ್ರಾ) - ಪೆಪ್ಪಿ
ಗೀತೆಗಳಲ್ಲೇ ಗುರುತಿಸಿಕೊಂಡಿರುವ ಚೈತ್ರಾ ಹೆಚ್.ಜಿ. ಫಾರ್ ಎ ಚೇಂಜ್ ಇಲ್ಲಿ ಮಾಧುರ್ಯ
ಪ್ರಧಾನ ಗೀತೆಯನ್ನು ಹಾಡಿದ್ದಾರೆ. ಸಾಹಿತ್ಯ - ಕವಿರಾಜ್
7/10
೬. ಮಂದಾರ ಮಂದಾರ (ರಾಜೇಶ್ ಕೃಷ್ಣನ್) - ಅಲ್ಬಂನ
ಮತ್ತೊಂದು ಉತ್ತಮವಾದ ಹಾಡು. ರಾಜೇಶ್ ಕೃಷ್ಣನ್ ಎಂದಿನಂತೆ ಉತ್ತಮ!. ಹೃದಯ ಶಿವ
ಸಾಹಿತ್ಯ ಕೂಡ ಸೊಗಸಾಗಿ ಬರೆದಿದ್ದಾರೆ. ಮೃದುವಾದ ಹಿನ್ನೆಲೆ ಸಂಗೀತ ಕೂಡ ಖುಷಿ
ಕೊಡುತ್ತದೆ.
8/10
Thanks to Ajay Kumar for the review.
No comments:
Post a Comment